ಅಭಿಪ್ರಾಯ / ಸಲಹೆಗಳು

ಪ್ರಾದೇಶಿಕ ಕೇಂದ್ರ - ಧಾರವಾಡ

ಪ್ರಾದೇಶಿಕ ಕೇಂದ್ರ ಧಾರವಾಡ

 

ಮೈಸೂರಿನ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯು ಪಂಚಾಯತ್ ರಾಜ್ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳಿಗೆ, ಇಲಾಖೆಯ ಅನುಷ್ಠಾನಾಧಿಕಾರಿಗಳಿಗೆ, ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳು, ಪಂಚಾಯತ್ ರಾಜ್ ವಿಷಯಗಳು, ಆಡಳಿತ ವಿಕೇಂದ್ರೀಕರಣ ಮತ್ತು ಇಲಾಖೆಗಳ ಯೋಜನೆಗಳ ಬಗ್ಗೆ ಸಮಕಾಲಿನ ತಾಂತ್ರಿಕ ವ್ಯವಸ್ಥೆಯ ಉಪಗ್ರಹ ಆಧಾರಿತ ತರಬೇತಿ ಕಾರ್ಯಕ್ರಮಗಳನ್ನು ಹಾಗೂ ಮುಖಾ ಮುಖಿ ತರಬೇತಿ ಕಾರ್ಯಕ್ರಮಗಳನ್ನು ಏರ್ಪಡಿಸುತ್ತದೆ.
ಈ ಮೇಲಿನ ಸೂಚಿತ ತರಬೇತಿ ಕಾರ್ಯಕ್ರಮಗಳ ಸೌಲಭ್ಯವನ್ನು ರಾಜ್ಯದ ವಿವಿದೆಡೆ ವಿಕೇಂದ್ರೀಕರಿಸುವ ನಿಟ್ಟಿನಲ್ಲಿ ಹಾಗೂ ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸುವ ಕ್ರಮವಾಗಿ ಉತ್ತರ ಕರ್ನಾಟಕ ಭಾಗದ ಪಂಚಾಯತ್ ರಾಜ್ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳಿಗೆ ಹಾಗೂ ಕಾರ್ಯಕಾರಿ ಸಮೂಹಕ್ಕೆ ವಿಸ್ತರಿಸಿ, ಪರಿಣಾಮಕಾರಿಯಾಗಿ ತರಬೇತಿ ನೀಡಲು ಆ ಭಾಗದ ಪ್ರಮುಖ ಕೇಂದ್ರದಲ್ಲಿ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ತರಬೇತಿ ಕೇಂದ್ರದ ಒಂದು ವಿಭಾಗವನ್ನು ಸ್ಥಾಪಿಸುವುದು ಅತ್ಯಾವಶ್ಯಕವೆಂದು ಮನಗಂಡು ಸರ್ಕಾರಿ ಆದೇಶ ಸಂಖ್ಯೆ: ಗ್ರಾಅಪ 111 ತಾಪಸ2010, ಬೆಂಗಳೂರು ದಿನಾಂಕ 21-10-2011ರ ಮೇರೆಗೆ ಈ ಮೇಲಿನಂತೆ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ತರಬೇತಿ ಸಂಸ್ಥೆಯ ಪ್ರಾದೇಶಿಕ ಕೇಂದ್ರವನ್ನು ಧಾರವಾಡದಲ್ಲಿ ಸ್ಥಾಪಿಸಿ ಆ ಸಂಸ್ಥೆಯ ಮುಖಾಂತರ ಈ ವ್ಯಾಪ್ತಿಗೊಳಪಡುವ ಪಂಚಾಯತ್ ರಾಜ್ ಸಂಸ್ಥೆಗಳ ಆಡಳಿತ ಬಲಪಡಿಸುವ ದೃಷ್ಟಿಯಿಂದ ಸಾಮರ್ಥ್ಯಾಭಿವೃದ್ಧಿ ಕಾರ್ಯಕ್ರಮಗಳು ಮತ್ತು ತರಬೇತಿ ಚಟುವಟಿಕೆಗಳನ್ನು ಆಯೋಜಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ. ಇದರ ಪರಿಣಾಮ 31-01-2011 ರಂದು ಪ್ರಾದೇಶಿಕ ಕೇಂದ್ರವು ಸಿಡಾಕ್ ಸಂಸ್ಥೆ, ಬೇಲೂರು ಕೈಗಾರಿಕಾ ಪ್ರದೇಶ, ಧಾರವಾಡದಲ್ಲಿ ಪ್ರಾರಂಭವಾಯಿತು. ಪ್ರಸ್ತುತ ಸದರ ಪ್ರಾದೇಶಿಕ ಕೇಂದ್ರವು ಪಂಚಾಯತ್ ರಾಜ್ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳಿಗೆ ಹಾಗೂ ಇಲಾಖೆಯ ಅಧಿಕಾರಿಗಳಿಗೆ ಆಡಳಿತ ಕೌಶಲ್ಯದ ಸಾಮರ್ಥ್ಯಾಭಿವೃದ್ಧಿ, ಪುನಶ್ಚೇತನ ತರಬೇತಿಗಳನ್ನು ಮತ್ತು ವೃತ್ತಿ ಬುನಾದಿ ತರಬೇತಿಗಳನ್ನು ನಿರಂತರವಾಗಿ ಅತ್ಯಂತ ಯಶಸ್ವಿಯಾಗಿ ಆಯೋಜಿಸುತ್ತ ಬರುತ್ತಿದೆ.
      ತರಬೇತಿಗಳನ್ನು ವ್ಯವಸ್ಥಿತಾಗಿ ಆಯೋಜಿಸಲು ಮೂಲಸೌಕರ್ಯವನ್ನು ಒದಗಿಸಿ ಪ್ರಾದೇಶಿಕ ಕೇಂದ್ರಗಳನ್ನು ಬಲಪಡಿಸಲು ಸಂಸ್ಥೆಯ ಪ್ರಾದೇಶಿಕ ಕೇಂದ್ರಕ್ಕೆ ನೂತನ ಕಟ್ಟಡವನ್ನೂ ಸರ್ಕಾರವು ಮಂಜೂರು ಮಾಡಿದ್ದು ಹುಬ್ಬಳ್ಳಿ ಮತ್ತು ಧಾರವಾಡದ ಮಧ್ಯೆ ರಾಯಾಪೂರದ ವ್ಯಾಪ್ತಿಯಲ್ಲಿ 2-00 ಏಕರೆಯಷ್ಟು ಜಾಗವನ್ನು ನೂತನ ಕಟ್ಟಡ ನಿರ್ಮಾಣಕ್ಕಾಗಿ ಮಂಜೂರು ಮಾಡಲಾಗಿದ್ದು, ದಿನಾಂಕ 12-9-2017ರಂದು ನೂತನ ಪ್ರಾದೇಶಿಕ ಕಟ್ಟಡದ ಶಂಕು ಸ್ಥಾಪನೆಗೊಂಡು ನವೀನ ವಿನ್ಯಾಸದಿಂದ ನಿರ್ಮಾಣವಾಗುತ್ತಿರುವ ಪ್ರಾದೇಶಿಕ ಕೇಂದ್ರದ ನೂತನ ಕಟ್ಟಡವು ಪ್ರಸ್ತುತ ಮುಕ್ತಾಯದ ಹಂತದಲ್ಲಿದೆ.

 

ಪ್ರಾದೇಶಿಕ ಕೇಂದ್ರ

ಸಿಡಾಕ್ ಸಂಸ್ಥೆ ಆವರಣ,

ಬೇಲೂರು ಕೈಗಾರಿಕಾ ಪ್ರದೇಶ,

ಧಾರವಾಡ– 580011

ದೂ: 0836-2486603           

E-mail:- sirddharwad@gmail.com

ಇತ್ತೀಚಿನ ನವೀಕರಣ​ : 05-01-2022 05:22 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಅಬ್ದುಲ್‌ ನಜೀರ್‌ ಸಾಬ್‌ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080