ಅಭಿಪ್ರಾಯ / ಸಲಹೆಗಳು

ಧ್ಯೇಯೋದ್ದೇಶಗಳು

ಸೊಸೈಟಿಯ ಧ್ಯೇಯೋದ್ದೇಶಗಳು:


ಅಬ್ದುಲ್ ನಜೀರ್ ಸಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯನ್ನು ನಿರ್ವಹಿಸಲು ಸ್ಥಾಪಿಸಲಾದ ಸೊಸೈಟಿಯ ಉದ್ದೇಶಗಳನ್ನು ಈ ಕೆಳಗಿನಂತೆ ವಿವರಿಸಲಾಗಿದೆ
ಎ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಆಡಳಿತ ಮತ್ತು ಸಂಬAಧಿತ ಕ್ಷೇತ್ರಗಳಲ್ಲಿ ರಾಜ್ಯ ಮಟ್ಟದ ಅಪೆಕ್ಸ್ ತರಬೇತಿ ಸಂಸ್ಥೆಯಾಗಿ ಕಾರ್ಯನಿರ್ವಹಿಸುವುದು
ಬಿ. ಗ್ರಾಮೀಣ ಪ್ರದೇಶಗಳ ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಸುರಕ್ಷತೆಯ ಸುಧಾರಣೆಗೆ ಕಾರಣವಾಗುವ ಸಂಬAಧಿತ ಕ್ಷೇತ್ರಗಳು ಮತ್ತು ಅಂಶಗಳ ಅಧ್ಯಯನವನ್ನು ಉತ್ತೇಜಿಸುವುದು ಮತ್ತು ಇದಕ್ಕಾಗಿ:
i.    ತರಬೇತಿ ಕಾರ್ಯಕ್ರಮಗಳು, ಸಂಶೋಧನೆ, ಕ್ರಿಯಾ ಸಂಶೋಧನೆ, ಸಮಾವೇಶಗಳು, ಕಾರ್ಯಾಗಾರಗಳು, ಸೆಮಿನಾರ್‌ಗಳು ಮತ್ತು ಉಪನ್ಯಾಸಗಳು ಇತ್ಯಾದಿಗಳನ್ನು ನಡೆಸುವುದು.
ii.    ಭಾರತ ಸರ್ಕಾರ ಅಥವಾ ರಾಜ್ಯ ಸರ್ಕಾರದ ಸಹಾಯದಿಂದ ಅಥವಾ ಸ್ಥಾಪಿತವಾದ ವಿಶ್ವವಿದ್ಯಾನಿಲಯಗಳು, ಐಸಿಎಸ್‌ಎಸ್‌ಆರ್ ಸಂಶೋಧನಾ ಸಂಸ್ಥೆಗಳು ಮತ್ತು ತರಬೇತಿ ಕೇಂದ್ರಗಳು ಅಥವಾ ಭಾರತ ಸರ್ಕಾರದಿಂದ ಗುರುತಿಸಲ್ಪಟ್ಟ ಯಾವುದೇ ಹೆಸರಾಂತ ಸಂಸ್ಥೆಗಳ ಮೂಲಕ ತನ್ನದೇ ಆದ ಅಥವಾ ಇತರ ಏಜೆನ್ಸಿಗಳ ಮೂಲಕ ಸಂಶೋಧನೆಗಳನ್ನು ಕೈಗೊಂಡು ಸಂಯೋಜಿಸುವುದು.
iii.    (i) ವಿಕೇಂದ್ರೀಕೃತ ಯೋಜನೆಯನ್ನು ಸಿದ್ಧಪಡಿಸುವತ್ತ ಕೇಂದ್ರಗಳನ್ನು ಸ್ಥಾಪಿಸುವುದು; (ii) ಸ್ಥಳೀಯ ಆಡಳಿತ; (iii) ಜೀವನೋಪಾಯ ಮತ್ತು ತಾಂತ್ರಿಕ ಉಪಕ್ರಮಗಳು; (iv) ಸಂಶೋಧನೆ, ಮೌಲ್ಯಮಾಪನ ಮತ್ತು ದಾಖಲೆ ಮತ್ತು (v) ಸಮುದಾಯ ಸಬಲೀಕರಣ ಇತ್ಯಾದಿ, ಸಾಧಿಸುವತ್ತ ಕ್ರಮವಹಿಸುವುದು.
iv.    ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಮತ್ತು ಅಂತಹುದೇ ಕಾರ್ಯಕ್ರಮಗಳ ವಿವಿಧ ಕಾರ್ಯಕ್ರಮಗಳ ಯೋಜನೆ ಮತ್ತು ಅನುಷ್ಠಾನಕ್ಕೆ ಸಂಬAಧಿಸಿದ ನಿರ್ದಿಷ್ಟ ಸಮಸ್ಯೆಗಳಿಗೆ ವಿಶ್ಲೇಷಣೆ ಮತ್ತು ಪರಿಹಾರಗಳನ್ನು ಪ್ರಸ್ತಾಪಿಸುವುದು
v.    ತರಬೇತಿ ಕೇಂದ್ರಗಳು ಆಯೋಜಿಸಿರುವ ತರಬೇತಿ ಕಾರ್ಯಕ್ರಮಗಳನ್ನು ಅನುಸರಿಸಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ಇತರ ಯಾವುದೇ ಸಚಿವಾಲಯಗಳು ಮತ್ತು ಅಧಿಕಾರಿಗಳಿಗೆ ಅವರ ತರಬೇತಿ ಕಾರ್ಯಕ್ರಮಗಳ ಬಗ್ಗೆ ಸಲಹೆ ನೀಡುವುದು
vi.    ಪತ್ರಿಕೆಗಳು, ನಿಯತಕಾಲಿಕಗಳು, ಪುಸ್ತಕಗಳು ಮತ್ತು ಇ-ಕಲಿಕಾ ಸಾಮಗ್ರಿಗಳನ್ನು ತಯಾರಿಸಿ, ಮುದ್ರಿಸಿ ಮತ್ತು ಪ್ರಕಟಿಸುವುದು
vii.    ಇದೇ ರೀತಿಯ ಉದ್ದೇಶಗಳಲ್ಲಿ ಆಸಕ್ತಿ ಹೊಂದಿರುವ ಭಾರತ ಅಥವಾ ವಿದೇಶದಲ್ಲಿರುವ ಇತರ ಸಂಸ್ಥೆಗಳು, ಸಂಘಗಳು ಮತ್ತು ಸಂಘಗಳೊAದಿಗೆ ಸಮನ್ವಯ ನಡೆಸುವುದು
viii.    Sಂಖಿ ಅಥಿಛಿಟe (ವ್ಯವಸ್ಥಿತವಾಗಿ ತರಬೇತಿ ಆಯೋಜಿಸಲು ಅನುಸರಿಸಲ್ಪಡುವ ಕಾರ್ಯತಂತ್ರ) ಗೆ ಅನುಗುಣವಾಗಿ ತರಬೇತಿ ಕಾರ್ಯಕ್ರಮಗಳನ್ನು ನಡೆಸಲು ಇತರ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು ಮತ್ತು ನಾಗರಿಕ ಸಮಾಜ ಸಂಸ್ಥೆಗಳೊAದಿಗೆ ಸಮನ್ವಯತೆ ಸಾಧಿಸುವುದು.
ix.    ಫೆಲೋಶಿಪ್, ವಿದ್ಯಾರ್ಥಿವೇತನ, ಬಹುಮಾನ ಮತ್ತು ಸೊಸೈಟಿಯ ಉದ್ದೇಶಗಳನ್ನು ಹೆಚ್ಚಿಸಲು ಸ್ಟೈಫಂಡ್ ಇತ್ಯಾದಿಗಳನ್ನು ನೀಡುವುದು.
x.    ಸಾಮಾಜಿಕ ವಿಜ್ಞಾನ ಸಂಶೋಧನೆ ಮತ್ತು ಸಾಮಾಜಿಕ ವಲಯದ ಅಭಿವೃದ್ಧಿ ಕ್ಷೇತ್ರಗಳಲ್ಲಿ ಕಂಡುಕೊAಡ ಮಾಹಿತಿಗಳನ್ನು ಸಂಘಟಿಸಲು, ಉತ್ತೇಜಿಸಲು, ಪ್ರಸಾರ ಮಾಡಲು ಅಗತ್ಯ ಕ್ರಮವಹಿಸುವುದು.
xi.    ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನದಲ್ಲಿನ ಅಂತರವನ್ನು ಗುರುತಿಸುವುದು ಮತ್ತು ಪರಿಹಾರ ಕ್ರಮಗಳನ್ನು ಸರ್ಕಾರಕ್ಕೆ ಸೂಚಿಸುವುದು
xii.    ವಿಕೇಂದ್ರೀಕರಣ ಮತ್ತು ಗ್ರಾಮೀಣಾಭಿವೃದ್ಧಿ ಕ್ಷೇತ್ರಗಳಲ್ಲಿ ಯಶಸ್ಸಿನ ಕಥೆಗಳು, ಅತ್ಯುತ್ತಮ ಅಭ್ಯಾಸಗಳು ಇತ್ಯಾದಿಗಳನ್ನು ದಾಖಲಿಸುವುದು
xiii.    ಸಂಶೋಧನಾ ವರದಿಗಳು, ಪುಸ್ತಕಗಳು, ಮೊನೊಗ್ರಾಫ್ ಇತ್ಯಾದಿಗಳ ಪ್ರಕಟಣೆ ಮಾಡುವುದು.
xiv.    ಅಭಿವೃದ್ಧಿ ಮತ್ತು ಸಬಲೀಕರಣವನ್ನು ಉತ್ತೇಜಿಸಲು ಇತರ ಎಲ್ಲ ಚಟುವಟಿಕೆಗಳನ್ನು ಕೈಗೊಳ್ಳುವುದು
xv.    ನೀತಿ ಸೂತ್ರೀಕರಣ ಮತ್ತು ನೀತಿ ವಿಶ್ಲೇಷಣೆಯಲ್ಲಿ ಕರ್ನಾಟಕ ಸರ್ಕಾರಕ್ಕೆ ಸಹಾಯ ಮಾಡುವುದು ಮತ್ತು ಪರಿಹಾರ ಕ್ರಮಗಳನ್ನು ಸೂಚಿಸುವುದು
xvi.    ಲಾಭೋದ್ದೇಶವಿಲ್ಲದ ಉದ್ದೇಶದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಕಾನೂನಾತ್ಮಕವಾಗಿ ಸಕಾರಾತ್ಮಕ ಧೋರಣೆಯಿಂದ ಉತ್ತೇಜಿಸುವತ್ತ ಕ್ರಮವಹಿಸುವುದು.

ಇತ್ತೀಚಿನ ನವೀಕರಣ​ : 01-01-2022 01:03 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಅಬ್ದುಲ್‌ ನಜೀರ್‌ ಸಾಬ್‌ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080